ಕಾಸರಗೋಡು : ಕುಂಬಳೆಯ ಸರೋವರ ಕ್ಷೇತ್ರ ಎಂದೂ ಕರೆಯಲ್ಪಡುವ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಬಬಿಯಾ-3 ಎಂದು ಹೆಸರಿಸಲಾದ ಮೊಸಳೆ ಮರಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಶುಕ್ರವಾರ ಸಂಜೆ ತನ್ನ ಮೊದಲ ಬಾರಿಗೆ ದೇವಾಲಯದ ಎತ್ತರದ ಭಾಗದಲ್ಲಿ ಪ್ರತ್ಯಕ್ಷವಾಗಿದೆ.
ಸುಮಾರು 80 ವರ್ಷಗಳ ಕಾಲ ದೇವಾಲಯದ ಕೊಳದಲ್ಲಿ ಪೂಜಿಸಲ್ಪಡುವ ಬಬಿಯಾ ಮೊಸಳೆಯು ಅಕ್ಟೋಬರ್ 9, 2022 ರಂದು ಮೃತಪಟ್ಟಿತ್ತು . ಅದರ ಮರಣದ ಒಂದು ವರ್ಷದ ನಂತರ, ಮರಿ ಮೊಸಳೆಯು ಕೊಳದಲ್ಲಿ ಕಾಣಿಸಿಕೊಂಡಿತ್ತು ಬಳಿಕ ಅದರ ಸಂಪೂರ್ಣ ನೋಟವು ಇಲ್ಲಿಯವರೆಗೆ ಭಕ್ತರಿಗೆ ಕಾಣಸಿಗಲ್ಲ ಆದರೆ ಕಳೆದ ಎರಡು ದಿನದಿಂದ ದಡಕ್ಕೆ ಬಂದು ಭಕ್ತರಿಗೆ ದರ್ಶನ ನೀಡಿದೆ.
ಜೂನ್ 14 ರಂದು ದೇವಾಲಯದ ಗರ್ಭಗುಡಿಯ ಮುಂಭಾಗದ ಕಲ್ಲಿನ ಮೇಲೆ ಬಬಿಯಾ-3 ವಿಶ್ರಮಿಸುತ್ತಿದ್ದಳು. ಈ ವೇಳೆ ದೇವಸ್ಥಾನ ಮುಚ್ಚಿದ್ದರೂ ಸಂಜೆ ವೇಳೆಗೆ ದೇವಸ್ಥಾನದ ಅರ್ಚಕರು ಆಗಮಿಸಿ ಫೋಟೋ ಸೆರೆ ಹಿಡಿದು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.