ಕಾಸರಗೋಡು : ಆಟೋ ರಿಕ್ಷಾ ಮತ್ತು ಶಾಲಾ ಬಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿದ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕ ಎಂಬಲ್ಲಿ ಸೋಮವಾರ ಸಂಜೆ 5 ಗಂಟೆಗೆ ಸಂಭವಿಸಿದೆ. ಮಾನ್ಯ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಬಸ್ ಪೆರ್ಲ ಕಡೆಯಿಂದ ತೆರಳುತ್ತಿದ್ದಾಗ ಮೊಗ್ರಾಲ್ ಪುತ್ತೂರು ಮೂಲದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಬಲಿಯಾದವರಲ್ಲಿ ಆಟೋ ರಿಕ್ಷಾ ಚಾಲಕ ಎ ಹೆಚ್ ಅಬ್ದುಲ್ ರವೂಫ್ ಮತ್ತು ಮೂವರು ಮಹಿಳೆಯರು ಪ್ರಯಾಣಿಕರಿದ್ದರು. ಪೆರ್ಲದಲ್ಲಿ ಮಕ್ಕಳನ್ನು ಇಳಿಸಿ ಖಾಲಿ ಇದ್ದ ಬಸ್ ಪಳ್ಳತ್ತಡ್ಕ ಗುಳಿಗ ಬನ ಎಂಬಲ್ಲಿ ತಿರುವಿನಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿ ಇದ್ದ ೫ ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ,ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.


