Friday, March 13, 2026
Flats for sale
Homeರಾಜಕೀಯಕಾರವಾರ : ಸಿದ್ದರಾಮುಲ್ಲಾ ಖಾನ್ ಬಳಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ : ಅನಂತಕುಮಾರ್‌...

ಕಾರವಾರ : ಸಿದ್ದರಾಮುಲ್ಲಾ ಖಾನ್ ಬಳಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ : ಅನಂತಕುಮಾರ್‌ ಹೆಗಡೆ.

ಕಾರವಾರ : ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸರಕಾರವನ್ನು ಮುಜುಗರಕ್ಕೆ ತರುವಂತಹ ಕೆಲಸವನ್ನು ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಮಾಡ್ತಾ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಸಿದ್ದರಾಮುಲ್ಲಾ ಖಾನ್ ಬಳಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲುಹಣವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಹಿಂದುಳಿದವರು, ಎಸ್​ಸಿ, ಎಸ್​ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ.ಅಭಿವೃದ್ಧಿ ಯೋಜನೆಗಳಿಗೆ, ಶಾಸಕರಿಗೆ ಕೊಡಲು ಹಣ ಇಲ್ಲ ಅಂತಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ರಾಜ್ಯ ಲೂಟಿ ಹೊಡೆದು, ದಿವಾಳಿ ಮಾಡಿ, ಮತ ಪಡೆಯಲು ಹೊರಟಿದ್ದಾರೆ. ಇಷ್ಟು ಹೇಸಿಗೆ, ದರಿದ್ರ ಸರ್ಕಾರ ನಾನೆಲ್ಲೂ ನೋಡಿಲ್ಲ. ನಮಗೆ ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಮೋದಿ ಸರ್ಕಾರ ಅಭಿವೃದ್ಧಿ ಮಾಡಿದಷ್ಟು ಸಿದ್ದರಾಮಯ್ಯ ಸರಕಾರ ಮಾಡಿಲ್ಲ ,ಹಣ ಇಲ್ಲದೆ ದಿವಾಳಿಯಾಗಿ ದೇವಸ್ಥಾನ ಆದಾಯಕ್ಕೆ ಕಣ್ಣು ಹಾಕಿದ್ದಾರೆ ನಾಚಿಗೆಯಾಗಬೇಕು ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಕಟ್ಟಿರುವ ತೆರಿಗೆ ಹಣಕ್ಕೆ ಲೆಕ್ಕ ಕೊಡಿ. ದೇಶದಲ್ಲಿ ಶೇ.99.‌9 ರಷ್ಟು ಹಿಂದೂಗಳು ತೆರಿಗೆ ಕಟ್ಟುತ್ತಾರೆ. ನಮ್ಮ ಹಣ ತೆಗೆದುಕೊಂಡು ಹೋಗಿ ಮಸೀದಿ, ಚರ್ಚ್‌ಗೆ ಏಕೆ ನೀಡಿದ್ದೀರಿ? ನಮ್ಮ ತೆರಿಗೆ ಹಣ ನಮಗೆ ನೀಡಿ. ದೇವಸ್ಥಾನಗಳು ಹಾಳುಬಿದ್ದಿವೆ, ಇದಕ್ಕೆ ಹಣ ನೀಡಲು ಸರ್ಕಾರದಲ್ಲಿ ದುಡ್ಡಿಲ್ಲ. ಆದರೆ ಮಸೀದಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ದುಡ್ಡಿದೆ ಎಂದು ಕಿಡಿಕಾರಿದರು.ಸಿದ್ದರಾಮುಲ್ಲಾ ಖಾನ್‌ಗೆ ಏಕೆ ತೊಂದರೆ? ಸಿಎಂಗೆ ದುರಹಂಕಾರ, ಓಸಿ ಚೀಟಿ ಬರೆದಂತೆ ಫೈಲ್‌ನ್ನು ಬರೆಯುತ್ತಾರೆ. ಓಸಿ ಚೀಟಿಗಾದರೂ ಬೆಲೆ ಇರುತ್ತೆ, 1 ರೂ. ಕೊಟ್ಟರೆ 80 ರೂ. ಕೊಡುತ್ತಾರೆ. ಸಿಎಂ ಲೆಟರ್‌ಗೆ ಎಷ್ಟು ದುರಂಕಾರದ ಸಹಿ ಹಾಕುತ್ತಾರೆ ಅಂದರೇ, ಆ ಲೆಟರ್ ಕೂಡಾ ನೋಡಬಾರದು ಅಂದೆನಿಸುತ್ತದೆ ಎಂದರು.

ರಾಜ್ಯ ಏನು ನಿಮ್ಮಪ್ಪನ ಆಸ್ತಿನಾ? ತಮಿಳುನಾಡು, ಆಂಧ್ರ, ಕೇರಳಕ್ಕೆ ಇಲ್ಲದ ವೇದನೆ ಇವರಿಗೆ ಏಕೆ?ಅವರಿಗೆ ಎಲ್ಲವೂ ಸರಿಹೋಗುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಹಣ ಕೊಡುತ್ತೀರಿ. ನಮ್ಮ ದೇವರು ಏನು ಅಪರಾಧ ಮಾಡಿದ್ದಾನೆ. ಹಿಂದೂಗಳು ಕಟ್ಟಿರುವ ತೆರಿಗೆ ಹಣದಿಂದ ರಾಜ್ಯ ಸರ್ಕಾರ ನಡೆಯುತ್ತಿದೆ. ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು ಅಂತಾ ನಾವು ಕುಳಿತರೇ ಸ್ಥಿತಿ ಏನಾಗುತ್ತೆ? ಬಿತ್ತಿ ಭಾಗ್ಯಗಳನ್ನು ಕೊಟ್ಟು ಗತಿಇಲ್ಲದಂತಾಗಿದೆ ಸರಕಾರ ಯಾರಪ್ಪನ ದುಡ್ಡಿನಿಂದ ಅಪ್ಲಾಸಂಖ್ಯಾತರ ಉದ್ದಾರ ಮಾಡುತ್ತಿದ್ದೀರಿ ನಾಚಿಗೆ ಆಗಲ್ವ ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular