Saturday, March 14, 2026
Flats for sale
Homeಜಿಲ್ಲೆಕಾರವಾರ : ವಿಶ್ವೇಶ್ವರ ಕಾಗೇರಿಯ ಸಂಪರ್ಕಕ್ಕೇ ಸಿಗದ ಸಂಸದ ಅನಂತ್ ಕುಮಾರ್ ಹೆಗಡೆ,ಮನೆಗೆ ಹೋದರೂ ಗೇಟು...

ಕಾರವಾರ : ವಿಶ್ವೇಶ್ವರ ಕಾಗೇರಿಯ ಸಂಪರ್ಕಕ್ಕೇ ಸಿಗದ ಸಂಸದ ಅನಂತ್ ಕುಮಾರ್ ಹೆಗಡೆ,ಮನೆಗೆ ಹೋದರೂ ಗೇಟು ತೆಗೆಯದ ಸಿಬ್ಬಂದಿ,ಸಂಕಷ್ಟದಲ್ಲಿ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ.

ಕಾರವಾರ : ಬಿಜೆಪಿಯ ಹಿಂದೂ ಫೈರ್ ಬ್ರಾಂಡ್ ಎಂದು ಹೆಸರುವಾಸಿಯಾಗಿರುವ ಉತ್ತರ ಕನ್ನಡ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಯವರಿಗೆ ಈ ಬಾರಿಯ ಲೋಕಸಭೆ ಟಿಕೆಟ್ ಕೈತಪ್ಪಿರುವುದರಿಂದ ಕಾರ್ಯಕರ್ತರಿಗೂ ಸಿಗದೆ ಟಿಕೆಟ್ ತಪ್ಪುವ ಸುಳಿವು ಸಿಕ್ಕಿದ ಕೂಡಲೇ ಅವರು ಮೌನಕ್ಕೆ ಶರಣಾಗಿದ್ದು ಟಿಕೆಟ್ ಘೋಷಣೆಯಾಗುವುದಕ್ಕೂ ಮೂರ್ನಾಲ್ಕು ದಿನಗಳ ಮೊದಲಿನಿಂದಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಇದೀಗ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಇದೀಗ ಸಂಕಷ್ಟ ಎದುರಾಗಿದ್ದು ಸಂಸದರ ಬೆಂಬಲ ಪಡೆಯಲು ಮುಂದಾದರೆ ಅವರೆಲ್ಲ ಕಾಗೇರಿಗೆ ಸಂಪರ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗಿದೆ. ಶಾಸಕ, ಸಂಸದರ ಮನವೋಲಿಸುವುದೇ ಬಿಜೆಪಿ ಅಭ್ಯರ್ಥಿ ಕಾಗೇರಿಗೆ ದೊಡ್ಡ ಸವಾಲಾಗಿದೆ. ಯಾರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.ಇಷ್ಟೇ ಅಲ್ಲದೆ, ಕಾರ್ಯಕರ್ತರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಮನೆಗೆ ಯಾರೆ ಬಂದರೂ ಒಳಕ್ಕೆ ಬಿಡದಂತೆ ಸಂಸದ ಹೆಗಡೆ ಸೆಕ್ಯೂರಿಟಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸಂವಿಂಧಾನ ಬದಲಾವಣೆ ಮಾಡಬೇಕೆಂದು ಈ ಹಿಂದೆ ನಾಲಗೆ ಹರಿಯಬಿಟ್ಟಿದ್ದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆ ಟಿಕೆಟ್ ಕೈ ತಪ್ಪಿದೆ ಎನ್ನಲಾಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ದೃಷ್ಟಿಯಿಂದ ಅನಂತಕುಮಾರ್ ಹೆಗಡೆ ಮನೆ ಬಳಿ ಹೋಗಿ ಕಾಗೇರಿ ಅರ್ಧ ಗಂಟೆ ಕಾದರೂ ಸೌಜನ್ಯಕ್ಕೂ ಗೇಟ್ ತೆರೆಸಿ ಅವರ ಬಳಿ ಮಾತನಾಡಿಲ್ಲ ಎಂಬುದು ಗೊತ್ತಾಗಿದೆ. ಅನಂತಕುಮಾರ್ ಹೆಗಡೆ ಸಹಕಾರ ಇಲ್ಲದೆ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಭಾರಿ ಕಷ್ಟ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕೂಡ ಹೆಗಡೆ ಇದೇ ರೀತಿ ಮೌನವಾಗಿದ್ದಕ್ಕೆ ಕಾಗೇರಿ ಸೋಲನುಭವಿಸಬೇಕಾಗಿ ಬಂದಿತ್ತು.

ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಭೆ ನಡೆದರೂ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಗೇರಿ ಕೈಗೆ ಸಿಗದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಕಾಗೇರಿಯವರ ಸದ್ಯದ ಪರಿಸ್ಥಿತಿ ನೋಡಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದು ಬಿಜೆಪಿ ಪಾಳಯದಲ್ಲಿ ತಲೆನೋವುಂಟಾಗಿದೆ.

ಈ ಬಗ್ಗೆ ವರಿಷ್ಠರು ಪಕ್ಷದೊಳಗಿನ ಭಿನ್ನ ಮತ ಶಮನಗೊಳಿಸಿದರೆ ಚುನಾವಣೆಯಲ್ಲಿ ಕಾರ್ಯಕರ್ತರಿಗೂ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ಬರುತ್ತದೆಯೆಂದು ಸ್ಥಳೀಯ ಬಿಜೆಪಿ ಕಾರ್ಯಕರ್ತ ತಿಳಿಸಿದ್ದಾರೆ. ಇದೀಗ ಬಿಜೆಪಿ ತೆಕ್ಕೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಉಳಿಸಿಕೊಳ್ಳುವುದು ಇದೀಗ ನುಂಗಲಾರದ ತುತ್ತಿನಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular