ಕಾರಟಗಿ : ಸಮೀಪದ ಬೇನ್ನೂರು ಗ್ರಾಮದ ಮಂಗಳ ಮುಖಿ ಜಮುನಾ ಜೋಗತಿ ಸುಮಾರು 4 ವರ್ಷದಿಂದ ತಾನು ಭಿಕ್ಷಾಟನೆ ಮಾಡಿ ಪ್ರತಿ ವರ್ಷ ಎರಡು ಜೋಡಿಗಳಿಗೆ ವಿವಾಹಕ್ಕೇ ಬೇಕಾಗುವ ತಾಳಿ ಸಮ ವಸ್ತ್ರ ಉಡುಗೆ ತೊಡುಗೆಗಳನ್ನು ಭೋಜನ ವ್ಯವಸ್ಥೆ ಕಲ್ಪಿಸುತಿದ್ದೇನೆ ಎಂದರು.

ಸಮಾಜ ಸೇವೆ ಮಾಡುತ್ತಿರುವುದು ಕ್ಷೇತ್ರದ ಜನತೆಗೆ ಮಾದರಿಯಾಗಿದ್ದಾರೆ.
ಈ ಹಿಂದೆ ಬೆನ್ನೂರು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದರೂ ವಿಶ್ವಾಸವನ್ನು ಕುಗ್ಗಿಸಿ ಕೊಳ್ಳದೆ ಸಮಾಜ ಕಾರ್ಯಗಳಲ್ಲಿ ಮುಂದುವರೆದಿದ್ದಾರೆ. ಇನ್ನು ಬಡ ಮಕ್ಕಳಿಗೆ ಶಾಲಾ ಪರಿಕರಗಳನ್ನು ಮಕ್ಕಳಿಗೆ ಸಿಹಿ ಬೋಜನ ವ್ಯವಸ್ಥೆ ಕಲ್ಪಿಸುತಿದ್ದೆನೆ ಇಷ್ಟೆಲ್ಲಾ ಸಮಾಜ ಸೇವೆ ಮಾಡುವ ನಮಗೆ ಸಮಾಜದಲ್ಲಿ ನಮ್ಮನ್ನ ಅತ್ಯಂತ ಕೀಳು ಮಟ್ಟದಲ್ಲಿ ನೋಡುತ್ತಿದ್ದಾರೆ.
ನಾವು ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದ್ದೇವೆ. ಆ ಭಗವಂತ ನಮ್ಮ ಹಾವ ಭಾವಗಳನ್ನು ಬದಲಿಸಿದರು ನಮ್ಮ ಮಾನವೀಯತೆಯನ್ನು ನಾವು ಮರೆತಿಲ್ಲ. ಭಿಕ್ಷಾಟನೆ ಮಾಡಿ ಬಂದ ಹಣದಲ್ಲಿ 25 ಪರ್ಸೆಂಟ್ ಹಣವನ್ನು ನಮ್ಮ ಜೀವನೋಪಾಯಕ್ಕೆ ಇರಿಸಿಕೊಂಡು 75% ಹಣವನ್ನು ಬಡ ಜನರಿಗೆ ವಿವಾಹ ಮಾಡಿಸುವುದು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಸಮಾಜ ಸೇವೆಗೆ ಮೀಸಲಿಟ್ಟಿದ್ದೇವೆ.
ಇನ್ನುಳಿದ ಸಾರ್ವಜನಿಕರ ಸಹಕಾರದೊಂದಿಗೆ ಮಕ್ಕಳಿಗೆ ದೀನದಲಿತರಿಗೆ ಅವರ ಶ್ರೇಯೋಭಿವೃದ್ಧಿಗೆ ಸಹಕರಿಸುತ್ತೇವೆ ಎಂದರು. ಈ ಒಂದು ಮಂಗಲ ಕಾರ್ಯಕ್ಕೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಇಂತಹೌ ಸಮಾಜಮುಖಿ ಕೆಲಸಕ್ಕೆ ಇವರುಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


