Wednesday, November 5, 2025
Flats for sale
Homeವಿದೇಶಕಾಠ್ಮಂಡು : ಮಾಜಿ ಮುಖ್ಯ ನ್ಯಾಯಾಧೀಶೆ ಸುಶೀಲ ಕರ್ಕಿ ನೇಪಾಳದ ಮೊದಲ ಮಹಿಳಾ ಪಿಎಂ..!

ಕಾಠ್ಮಂಡು : ಮಾಜಿ ಮುಖ್ಯ ನ್ಯಾಯಾಧೀಶೆ ಸುಶೀಲ ಕರ್ಕಿ ನೇಪಾಳದ ಮೊದಲ ಮಹಿಳಾ ಪಿಎಂ..!

ಕಾಠ್ಮಂಡು : ನೇಪಾಳದಲ್ಲಿ ಐದು ದಿನಗಳ ಜೆನ್ ಝಿ ಹಿಂಸಾತ್ಮಕ ಪ್ರತಿಭಟನೆಯ ನಡುವೆಯೂ ಶುಕ್ರವಾರ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಮಾಜಿ ಮುಖ್ಯ ನ್ಯಾಯಾಧೀಶೆ ಸುಶೀಲ ಕರ್ಕಿ ಅವರು ಪ್ರಧಾನಿಯಾಗಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌದೆಲ್, ಸೇನಾ ಮುಖ್ಯಸ್ಥ ಅಶಾಕ್ ರಾಜ್ ಸೆಗ್ಡಲ್ ಹಾಗೂ ಜನರಲ್ ಜೆನ್ ಝಿ ಚಳವಳಿಯ ಪ್ರತಿನಿಧಿಗಳು ಸೇರಿ ಕರ್ಕಿ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದರು.

ಕರ್ಕಿ ಯವರ ಪತಿ 52 ವರ್ಷಗಳ ಹಿಂದೆ ನೆರೆ ದೇಶ ನೇಪಾಳದಲ್ಲಿ ನಡೆದಿದ್ದ ಮೊದಲ ವಿಮಾನ ಹೈಜಾಕ್‌ನಲ್ಲಿ ಈಗಿನ ನೇಪಾಳ ಪ್ರಧಾನಿ ಸುಶೀಲಾ
ಕರ್ಕಿಅವರ ಪತಿ ದುರ್ಗಾ ಪ್ರಸಾದ್ ಸುಬೇದಿ ಅವರು ಕೂಡ ಭಾಗಿಯಾಗಿದ್ದರು. ಈ ವಿಮಾನದಲ್ಲಿ ಪ್ಯಾಸಾ, ಗೀತ್ ಸಿನೆಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಮಾಲಾ ಸಿನ್ಹಾ ಕೂಡ ಇದ್ದರು ಇದಕ್ಕೂ ಮೊದಲು ರ‍್ಯಾಪರ್-ಕಾಠ್ಮಂಡು ಮೇಯರ್ ಬಾಲೇಂದ್ರ ಶಾ, ಸುಶೀಲಾ ಕರ್ಕಿ ಹಾಗೂ ವಿದ್ಯುತ್ ಕ್ರಾಂತಿಯ ಹರಿಕಾರ ಗುಲ್‌ಮನ್ ಘಿಶಿಂಗ್ ಮಧ್ಯೆ ಈ ಮಹತ್ವದ ಹುದ್ದೆಗೆ ಪೈಪೋಟಿ ನಡೆದಿತ್ತು. ಆರಂಭದಲ್ಲಿ ಕರ್ಕಿ ಅವರನ್ನು ಪ್ರಧಾನಿಯಾಗಿ ಮಾಡಲು ಜೆನ್ ಝಿ ಗುಂಪು ಒಲವು ತೋರಿದರೂ ಆ ಬಳಿಕ ವಿದ್ಯುತ್ ಕ್ರಾಂತಿಯ ನಾಯಕ ಘಿಶಿಂಗ್ ಆಯ್ಕೆ ಮಾಡಲು ಅಪೇಕ್ಷಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular