ಕಲಬುರ್ಗಿ : ಈಗಿನ ವಿದ್ಯಾರ್ಥಿಗಳು ಕಲಿಯದೇ ಪಾಸ್ ಆಗಲು ದೇವರ ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ.ಕಳೆದ ಬಾರಿ ಅತ್ತೆ ಸಾಯುವ ಹರಕೆ ಆಯ್ತು ಈಗ ಪಿಯುಸಿ ವಿದ್ಯಾರ್ಥಿ ಒಬ್ಬರು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ನಾಗಾವಿ ಎಲ್ಲಮ್ಮ ದೇವಿಗೆ ಹರಕೆ ಹೊತ್ತು ಹುಂಡಿಗೆ ಹಣ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಇತ್ತಿಚೆಗೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಅತ್ತೆ ಸಾಯಲಿ ಎಂದು ಹರಕೆ ಹೊತ್ತು ಸೋಸೆ ಒಬ್ಬರು ನೋಟಿನ ಮೇಲೆ ಬರೆದು ಹುಂಡಿಗೆ ಹಣ ಹಾಕಿರುವ ಘಟನೆ ಭಾರಿ ವೈರಲ್ ಆಗಿತ್ತು ಇದೀಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಷ್ಟ್ರ ಕೂಟರ ಕುಲದೇವತೆ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಒಬ್ಬರು ಪರೀಕ್ಷೆಯಲ್ಲಿ ಪಾಸು ಮಾಡುವಂತೆ ಇಪ್ಪತ್ತು ರೂಪಾಯಿಯ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ್ದು ಕಂಡು ಬಂದಿದೆ.
ದೇವಸ್ಥಾನದಲ್ಲಿರುವ ಹುಂಡಿಯ ಹಣ ಎಣಿಕೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಯ ಕೈಗೆ ದೊರಕಿದೆ.ಈ 20 ರೂಪಾಯಿ ನೋಟ್ ಈಗ ವೈರಲ್ ಆಗ್ತಾ ಇದೆ.


