ಕಲಬುರಗಿ : ಜೈಲಿನೊಳಗೆ ಹಣ್ಣು, ಬಿರಿಯಾನಿ ತರಲು ಬಿಡದ ಹಿನ್ನೆಲೆ ಜೈಲಿನೊಳಗೆ ಮುಸ್ಲಿಂ ಕೈದಿಗಳಿಂದ ಪ್ರತಿಭಟನೆ ನಡೆದ ಘಟನೆ ಕಲಬುರಗಿ ನಗರ ಹೊರವಲಯದ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ .
ರಂಜಾನ್ ಹಿನ್ನಲೆಯಲ್ಲಿ ಹೊರಗಿನಿಂದ ಬಿರಿಯಾನಿ ಮತ್ತು ಹಣ್ಣುಗಳಿಗಾಗಿ ಕೈದಿಗಳ ಬೇಡಿಕೆ ಇಟ್ಟಿದ್ದು ಕೈದಿಗಳ ಚಿರಾಟ-ಕೂಗಾಟ ಹಾಗೂ ಜೈಲಿನ ಗೇಟ್ ಎಳೆದಾಟೋ ಶಬ್ದದ ವಿಡಿಯೋ ವೈರಲ್ ಆಗಿದೆ. ಸೆಂಟ್ರಲ್ ಜೈಲಿನ ‘ಡಿ’ ಗೇಟ್‌ನಿಂದ ‘ಎ’ ಗೇಟ್‌ವರೆಗೆ ಪ್ರತಿಭಟನನಿರತ ಕೈದಿಗಳು ಬಂದಿದ್ದು ಪ್ರತಿಭಟನೆ ವಿಕೋಪಕ್ಕೆ ಹೋಗ್ತಿದ್ದಂಗೆ ಸ್ಥಳಕ್ಕೆ ಬಂದ ಜೈಲ್ ಸೂಪರಿಂಟೆಂಡೆಂಟ್ ಭೇಟಿನೀಡಿದ್ದಾರೆ.
ಪ್ರತಿವರ್ಷ ರಂಜಾನ್ ರೋಜಾ ವೇಳೆ ಹೊರಗಿನಿಂದ ಹಣ್ಣು ಹಂಪಲು ಬಿಡುತ್ತಿದ್ದು ಆದರೆ ಈ ಬಾರಿ ಯಾಕೆ ಬಿಡಲ್ಲವೆಂದು ಜೈಲಾಧಿಕಾರಿಗಳ ಮುಂದೆ ಮುಸ್ಲಿಂ ಕೈದಿಗಳ ಆಕ್ರೋಶ ಹೊರಹಾಕಿದ್ದಾರೆ. ಕೈದಿಗಳ ಆಕ್ರೋಶಕ್ಕೆ ಮಣಿದು ಹಣ್ಣು ಹಂಪಲುಗಳನ್ನ ತಪಾಸಣೆ ಮಾಡಿ ಬಳಿಕ ಜೈಲಾಧಿಕಾರಿಗಳು ಒಳಗೆ ಬಿಟ್ಟಿದ್ದಾರೆಂದು ಮಾಹಿತಿ ದೊರೆತಿದೆ.


