ಕಲಬುರಗಿ : ಗೊಂಡ್ ಪರ್ಯಾಯ ಪದ ಕುರುಬರೆಂದು ಪರಿಗಣಿಸಲು ಕೇಂದ್ರ ಸರಕಾರಕ್ಕೆ ಆಗ್ರಹೀಸಿ ಪಟ್ಟಣದ ಮಿನಿ ವಿಧಾನಸಧದ ಆವರಣದಲ್ಲಿ ಬ್ರಹತ್ ಪ್ರತಿಭಟನೆ, ಕುರಿ ಮತ್ತು ಮೇಕೆ ಕಚೇರಿ ಒಳಗ ನುಗಿಸುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ರಿಲ್ಯಾನ್ಸ್ ಬಂಕ್ ನಿಂದ ಮಿನಿ ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ತಿಥಿಣಿ ಬ್ರಿಜ್ ಕನಕ ಗುರು ಪೀಠಾಧಿಪ ಶ್ರೀ ಸಿದ್ಧರಾಮಾನಂದಪುರಿ ಅವರು, ಗೊಂಡ ಮತ್ತು ಕುರುಬ ಇವರಡೂ ಒಂದೇ ಜಾತಿ ಸೇರಿದ ಪದಗಳು ಅದಕ್ಕಾಗಿ ಗೊಂಡ ಪದದ ಪರ್ಯಾಯ ಪದವೇ ಕುರುಬ ಅದಕ್ಕಾಗಿ ಕೇಂದ್ರ ಸರ್ಕಾರ ಶೀಘ್ರವಾಗಿ ಎಸ್. ಟಿ ಗೆ ಸೇರ್ಪಡೆ ಮಾಡಿಸಬೇಕು ಎಂದರು.
ಆದಿವಾಸಿಗಳಾದ ಗೊಂಡ್ ಜನರನ್ನು 1936 ರಲ್ಲಿ ರಾಣಿ ಎಲೆಜಬೆತ್ ಹಾಗೂ 1950 ರಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರು ಎಸ್ ಟಿ ಪಟ್ಟಿಯಲ್ಲಿ ಪರಿಗಣಿಸಿದ್ದಾರೆ. ಆದ್ದರಿಂದ ಸರಕಾರ ಗೊಂಡ್ ಪರ್ಯಾಯ ಪದ ಕುರುಬ ಸಮಾಜದ ಏಳಿಗೆಗಾಗಿ ಮುಂದಿನ ಭವಿಷ್ಯದ ಸಲುವಾಗಿ ಎಸ್ ಟಿ ಸೇರ್ಪಡೆಗೆ ಒತ್ತಾಯಿಸಿದರು.
ಕಲಬುರಗಿ, ಬೀದರ ಮತ್ತು ಯಾದಗಿರಿಯ ಕುರಬಾರನ್ನು ಸರ್ಕಾರವು 3 ತಿಂಗಳ ಒಳಗಾಗಿ ಎಸ್. ಟಿ ಸೇರ್ಪಡೆಗೆ ಸ್ಪಂದಿಸಲಿಲ್ಲವೆಂದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು


