Saturday, December 13, 2025
Flats for sale
Homeರಾಜ್ಯಕಲಬುರಗಿ : ಆಳಂದನಲ್ಲಿ ಮತಗಳವು ಕೇಸ್ ಗೆ ಬಿಗ್ ಟ್ವಿಸ್ಟ್,ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಪಾತ್ರ...

ಕಲಬುರಗಿ : ಆಳಂದನಲ್ಲಿ ಮತಗಳವು ಕೇಸ್ ಗೆ ಬಿಗ್ ಟ್ವಿಸ್ಟ್,ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಪಾತ್ರ ದೃಡ,S.I.T ಚಾಜ್೯ ಶೀಟ್ ಸಲ್ಲಿಕೆ.

ಕಲಬುರಗಿ : ಕಲಬುರಗಿಯ ಆಳಂದನಲ್ಲಿ ಮತಗಳವು ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ ಆಳಂದ ಮತಗಳವು ಪ್ರಕರಣ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಪಾತ್ರ ದೃಡವಾಗಿದ್ದು ಎಸ್ ಐ ಟಿ ಯಿಂದ ನ್ಯಾಯಾಲಯಕ್ಕೆ ಚಾಜ್೯ ಶೀಟ್ ಸಲ್ಲಿಸಲಾಗಿದೆ.

ಸುಭಾಷ್ ಗುತ್ತೇದಾರ್ , ಪುತ್ರ ಹರ್ಷಾನಂದ್ ಗುತ್ತೇದಾರ್ ವಿರುದ್ಧವು ಚಾಜ್೯ ಶೀಟ್ ಸಲ್ಲಿಸಿದು ತಂದೆ – ಮಗ ಸೇರಿ 7 ಮಂದಿ ವಿರುದ್ಧ ಚಾಜ್೯ ಶೀಟ್ ಸಲ್ಲಿಸಲಾಗಿದೆ. 2023 ರ ವಿಧನಸಭಾ ಚುನಾವಣೆಯಲ್ಲಿ ನಡೆದಿದ್ದ ಮತಗಳವು ಪ್ರಕರಣಕ್ಕೆ ಬಿ.ಕೆ ಸಿಂಗ್ ನೇತೃತ್ವದಲ್ಲಿ S.I.T ಗೆ ರಚಿಸಿದ್ದ ಸರ್ಕಾರ ತನಿಖೆ ಮುಗಿಸಿ 22 ಸಾವಿರ ಪುಟಗಳ ಚಾಜ್೯ ಶೀಟ್ ಸಲ್ಲಿಸಿದೆ.

ಮತಗಳವು ಬಗ್ಗೆ ಆರೋಪಿಸಿದ್ದ ಕೈ ಶಾಸಕ ಬಿ‌ಆರ್ ಪಾಟೀಲ್ ನಂತರ ರಾಹುಲ್ ಗಾಂಧಿಯೂ ಸಹ ವೋಟ್ ಚೋರಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು ಮತದಾರರ ಹೆಸರು ಅಳಿಸಲು ಗುತ್ತೇದಾರ್ ಹಣ ನೀಡಿ ಆಳಂದದಲ್ಲಿ 5994 ಮತದಾರರ ಹೆಸರು ಅಳಿಸಲಾಗಿದ್ದು ಇದಕ್ಕಾಗಿ ಸೈಬರ್ ಸೆಂಟರ್ ಬಳಸಿಕೊಂಡಿದ್ದ ಆರೋಪಕೇಳಿಬಂದಿತ್ತು.ಈ ಬಗ್ಗೆ ಮತದಾರರ ಹೆಸರು ಅಳಿಸಿ ಹಾಕಲು ಹಣ ಪಾವತಿ ಮಾಡಿದ್ದಾರೆಂದು ಎಸ್ ಐ ಟಿ ಅಧಿಕಾರಿಗಳುಚಾಜ್೯ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಗಂಭೀರ ಆರೋಪ ಮಾಡಿದ್ದ ಆಳಂದ ಕೈ ಶಾಸಕ ಬಿಆರ್ ಪಾಟೀಲ್ ಪ್ರಕರಣದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಪಾತ್ರ ದೃಡಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular