ಕಲಬುರಗಿ : ಅಂಗನವಾಡಿ ಮೊಟ್ಟೆ ಹಣದಲ್ಲಿ ಲಂಚದ ಪಾಲು ಕೇಳಿದ ಅಂಗನವಾಡಿ ಟೀಚರ್ ಹೀನಾ ಹಾಗೂ ಸೂಪರ್ ವೈಸರ್ ಪಿಂಕೂಬಾಯಿ ಗಾಯಕವಾಡ್ವರವರು ಲೋಕಾ ಬಲೆಗೆ ಬಿದ್ದಿದ್ದಾರೆ.
ಸುಮಾರು 6030 ರೂಪಾಯಿ ಹಣ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಟೀಚರ್ ಹಾಗೂ ಸೂಪರ್ ವೈಸರ್ ರವರು ಸಿಕ್ಕಿಬಿದ್ದಿದ್ದು ಮೂರು ತಿಂಗಳಮೊಟ್ಟೆ ಹಣ 14490 ರಲ್ಲಿ 4830 ಪಾಲು ಎಂದು ತಿಳಿದಿದೆ.
ತಿಂಗಳಿಗೆ 600 ರಂತೆ ಎರಡು ತಿಂಗಳ 1200 ರೂಪಾಯಿ ಲಂಚ ಸ್ವೀಕರಿಸುತ್ತಿದ್ದು ಕಲಬುರಗಿ ಉತ್ತರ ಸ್ಟೇಷನ್ ಬಜಾರ್ ಅಂಗನವಾಡಿಗೆ ಲೋಕಯುಕ್ತ ದಾಳಿ ನಡೆದಿದೆ.
ದೂರುದಾರ ಸೌಭಾಗ್ಯ ರಾಠೋಡ್ ದೂರಿನ ಮೇರೆಗೆ ದಾಳಿನಡೆದಿದ್ದು ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಸಿದ್ದರಾಜು ಸಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.ತನಿಖೆ ನಂತರ ಆರೋಪಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


