ಕರಾಚಿ : ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಣೆಯಾಗುವ ಮುನ್ನಯಿಂದಲೂ ಒಂದಿಲ್ಲೊಂದು ವಿಚಾರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಕಿಡಿಕಾರುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೊನೆಗೂ ಟಿ೨೦ ವಿಶ್ವಕಪ್ ಆಡಲು ಸಿದ್ಧಗೊಂಡಿದೆ. ಅಷ್ಟೇ ಅಲ್ಲದೇ, ಫೆಬ್ರವರಿ ೨ರಂದು ಶ್ರೀಲಂಕಾಗೆ ಪ್ರವಾಸ ಮಾಡುವುದಾಗಿ ಸ್ಪಷ್ಟಪಡಿಸಿದೆ.
ಈ ಮೂಲಕ ಕಳೆದ ಕೆಲ ತಿಂಗಳುಗಳಿಂದ ಇದ್ದ ವಿವಾದಗಳಿಗೆ ತೆರೆ ಬಿದ್ದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2026ರ T20 ವಿಶ್ವಕಪ್‌ನಲ್ಲಿ ಭಾಗವಹಿಸುವುದನ್ನು ದೃಢಪಡಿಸಿಲ್ಲ. ಆದರೆ ಶ್ರೀಲಂಕಾಕ್ಕೆ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಆಟಗಾರರು ಪಂದ್ಯಾವಳಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ತಿಳಿಸಲಾಗಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ಪಾಕಿಸ್ತಾನ ತಂಡವು ಲಾಹೋರ್‌ನಿಂದ ಏರ್ ಲಂಕಾ ವಿಮಾನದ ಮೂಲಕ ಕೊಲಂಬೊಗೆ ಹಾರಲಿದೆ. ಅಚ್ಚರಿಯೆಂದರೆ, ಪಾಕ್ ತಂಡ ಆಸ್ಟ್ರೇಲಿಯಾ ತಂಡದೊAದಿಗೆ ಕೊಲAಬೋಗೆ ಪ್ರವಾಸ ಬೆಳೆಸಲಿದೆ ಎಂದು ವರದಿಗಳು ಬಂದಿವೆ.
ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಹಿಂದೆ ಮಂಡಳಿಯು ಜನವರಿ 30 ಅಥವಾ ಫೆಬ್ರವರಿ 2 ತಮ್ಮ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಹೇಳಿದ್ದರು. ಬಾಂಗ್ಲಾದೇಶವನ್ನು ಪಂದ್ಯಾವಳಿಯಿAದ ಹೊರಹಾಕಿದ್ದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಗ್ಗೆ ಪಿಸಿಬಿ ಅಸಮಾಧಾನ ವ್ಯಕ್ತಪಡಿಸಿತ್ತು. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತ್ತು. ಇದರಿಂದ ಐಸಿಸಿ ಬಾಂಗ್ಲಾ ಬದಲಿಗೆ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ಗೆ ಜಾಗ
ಕಲ್ಪಿಸಿತು.
ನಖ್ವಿಗೆ ಭಾರಿ ಹಿನ್ನಡೆ: ಏಷ್ಯಾಕಪ್ ಟ್ರೋಫಿ ಎತ್ತಿಕೊಂಡು ಹೋದ ನಂತರ ನಖ್ವಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಅದರಲ್ಲೂ `ಐಸಿಸಿ ಬಗ್ಗೆ ಎರಡು ಧೋರಣೆಗಳನ್ನು ತೋರುತ್ತಿದೆ ಎನ್ನುವ ಮೂಲಕವೇ ವಿರೋಧ ವ್ಯಕ್ತಪಡಿಸಿದ್ದರು. ಭಾರತಕ್ಕೆ ದುಬೈನಲ್ಲಿ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಅವಕಾಶ ನೀಡಲಾಯಿತು, ಆದರೆ ಬಾಂಗ್ಲಾದೇಶಕ್ಕೆ ಟಿ೨೦ ವಿಶ್ವಕಪ್‌ಗೆ ಅದೇ ರೀತಿ ನೀಡಲಾಗಿಲ್ಲ. ಎಂದು ದೂರಿದ್ದರು.
ಈ ಮಧ್ಯೆ, ಟಿ 20 ವಿಶ್ವಕಪ್‌ಗಾಗಿ ಪಾಕಿಸ್ತಾನ ಶ್ರೀಲಂಕಾಕ್ಕೆ ಪ್ರಯಾಣಿಸಬೇಕೇ ಎಂಬುದರ ಕುರಿತು ಚರ್ಚಿಸಲು ಜನವರಿ26 ರಂದು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು. ಇದಾದ ಬಳಿಕ ಸ್ವತಃ ಪಾಕ್ ಆಟಗಾರರಿಂದಲೇ ನಖ್ವಿ ನಿರ್ಧಾರಗಳಿಗೆ ವಿರೋಧ ವ್ಯಕ್ತವಾಗಿತ್ತು. ಈ ಘಟನೆ ನಡೆದ ಮರುದಿನವೇ ಪಾಕ್ ಕ್ರಿಕೆಟ್ ಟಿ೨೦ ವಿಶ್ವಕಪ್ ಆಡಲು ಸಿದ್ಧವಿದೆ ಎಂಬ ಮಾಹಿತಿಗಳು ಬಂದಿದೆ. ಹೀಗಾಗಿ
ನಖ್ವಿಗೆ ಭಾರಿ ಹಿನ್ನಡೆಯಾಗಿದೆ.
ಪಾಕಿಸ್ತಾನ ತಂಡವನ್ನು ಕೊಲಂಬೊಗೆ ಕಳುಹಿಸಲು ನಖ್ವಿಗೆ ಸಲಹೆ ನೀಡಲಾಗಿದೆ ಎಂದು ಕೆಲ ವರದಿಗಳಾಗಿವೆ. ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿಯದಿದ್ದರೆ, ಫೆಬ್ರವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ವರದಿಗಳು ಸೂಚಿಸಿದ್ದವು. ಆದರೆ ಸೇಥಿ ಮತ್ತು ರಾಜಾ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸದಂತೆ ಸಲಹೆ ನೀಡಿದ್ದಾರೆ.


