ಕಡಬ : ಇತ್ತೀಚಿನ ದಿನದಲ್ಲಿ ಕಾಡುಪ್ರಾಣಿಗಳ ಉಪಟಳ ಜಾಸ್ತಿಯಾಗಿದ್ದು ಇದಕ್ಕೆ ಅರಣ್ಯ ಇಲಾಖೆಯ ಮಾಹಿತಿ ಕೊರತೆ ಹಾಗೂ ನಿರ್ಲಕ್ಷ್ಯವೇ ಎದ್ದು ಕಾಣುತ್ತಿದೆ. ಕಡಬದ ಕೊಣಾಜೆ ದೊಡ್ಡಮನೆ ಎಂಬಲ್ಲಿ ಮೇಯಲು ಬಿಟ್ಟಿದ್ದ ಹಸು ಮಂಗಳವಾರ ತೋಟ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ. ಹಸುವಿನ ಮೇಲೆ ಕಾಡಾನೆ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಅಶೋಕ್ ಎಂಬುವರಿಗೆ ಸೇರಿದ ಹಸುವನ್ನು ಮೇಯಲು ಬಿಡಲಾಗಿತ್ತು. ಆದರೆ, ಮನೆಗೆ ಹಿಂತಿರುಗಿರಲಿಲ್ಲ. ಬುಧವಾರ ಬೆಳಗ್ಗೆ ಮನೆಯವರು ಹಸು ಗಾಯಗೊಂಡು ಸತ್ತಿರುವುದನ್ನು ಕಂಡರು. ತೋಟದಲ್ಲಿನ ನೀರಾವರಿ ಪೈಪ್ಗಳು ಸಹ ಹಾನಿಗೊಳಗಾಗಿರುವುದು ಕಂಡುಬಂದಿದ್ದು, ಆ ಪ್ರದೇಶಕ್ಕೆ ಕಾಡು ಆನೆ ಬಂದಿರುವ ಅನುಮಾನವನ್ನು ರುಜುವಾತುಪಡಿಸುತ್ತದೆ.


