ಕಡಬ ; ಸರಕಾರಿ ಕೆಲಸ ದೇವರ ಕೆಲಸ ಅನ್ನುತ್ತಾರೆ , ಪ್ರಸ್ತುತ ಎಷ್ಟೋ ಜನ ಕೆಲಸವಿಲ್ಲದೆ ಕೂಲಿ ಮಾಡಿ ಬದುಕುವವರಿದ್ದಾರೆ ಆದರೆ ಇಲ್ಲಿ ಒಬ್ಬ ಬೂಪ ಸರಕಾರಿ ಕೆಲಸದ ಸಮಯದಲ್ಲಿ ಕುಡಿದು ಬಿದ್ದು ಅವತಾರ ತಾಳುವ ಘಟನೆ ದ.ಕ. ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಬಸ್ಸಿನಲ್ಲಿ ನಡೆದಿದೆ.
ಕುಡಿದ ಅವತಾರ ಪುರುಷನನ್ನು ಕಡಬ ತಾಲೂಕಿನ ಗೋಳಿತೊಟ್ಟುವಿನ ಗ್ರಾಮಕರಣಿಕ ನಾಗಸುಂದರ ಎಂದು ತಿಳಿದುಬಂದಿದೆ.
ಈ ಹಿಂದೆಯು ಹಲವು ಬಾರಿ ಮದ್ಯಪಾನ ಮಾಡಿ ಸಿಕ್ಕಿ ಬಿದ್ದಿದ್ದು ನಾಗಸುಂದರನ ಮದ್ಯಪಾನದ ಚಟದ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಲಾಗಿತ್ತು.ನಾಗಸುಂದರನ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.
ಕರ್ತವ್ಯದ ವೇಳೆಯೇ ಮದ್ಯಪಾನದ ಚಟ ಹೊಂದಿರುವ ನಾಗಸುಂದರನನ್ನು ಬಸ್ಸು ಚಾಲಕ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಕುಡಿತದ ಚಟದಿಂದಾಗಿ ಕಚೇರಿ,ಕೆಲಸದಲ್ಲೂ ಬೇಜವಾಬ್ದಾರಿ ವಹಿದಿದ್ದು,ಹಲವಾರು ದಾಖಲೆಗಳು ಮಿಸ್ ಆಗಿರುವ ಬಗ್ಗೆಯೂ ಆರೋಪ ಕೇಳಿಬಂದಿತ್ತು.ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಮುಂದೆ ಕುಡಿದು ಕೆಲಸಕ್ಕೆ ಬರುವುದಿಲ್ಲವೆಂದು ಮುಚ್ಚಲಿಕೆ ಬರೆದು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.


