ಕಡಬ : ಪಶ್ಚಿಮ ಘಟ್ಟದ ತಪ್ಪಲಲ್ಲಿ ಮತ್ತೇ ನಕ್ಸಲ್ ಚಟುವಟಿಕೆ ಬಿರುಸುಗೊಂಡಿದ್ದು ANF ಕೂಂಬಿಂಗ್ ಕಾರ್ಯಚರಣೆ ನಡುವೆ ಮತ್ತೇ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ.
6 ಮಂದಿ ಶಸ್ತ್ರ ಸಜ್ಜಿತ ನಕ್ಸಲರ ತಂಡ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ಪ್ರತ್ಯಕ್ಷವಾಗಿದ್ದು ರಾತ್ರಿ 7 ಕ್ಕೆ ಚೇರು ಗ್ರಾಮನ ಮನೆಯೊಂದಕ್ಕೆ ಭೇಟಿ ನೀಡಿ ಮನೆಯಲ್ಲಿ ಊಟ ಮಾಡಿ ಮೊಬೈಲ್ ಚಾರ್ಜ್ ಮಾಡಿ ಮನೆಯಿಂದ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆಂದು ವರದಿಯಾಗಿದೆ.ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ಭೇಟಿ ನೀಡಿದ್ದು ಇದೀಗ ಚೇರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ದಕ್ಷಿಣ ಕನ್ನಡ – ಕೊಡಗು ಗಡಿಭಾಗ ದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ನಕ್ಸಲರು ಪ್ರತ್ಯಕ್ಷವಾಗುತ್ತಿದ್ದು ಪಶ್ಚಿಮ ಘಟ್ಟ ಪ್ರದೇಶ ಮತ್ತೇ ನಕ್ಸಲ್ ಕಾರಿಡಾರ್ ಆಗುತ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.ಪಶ್ಚಿಮ ಘಟ್ಟ ಪ್ರದೇಶ ದಲ್ಲಿ ಮತ್ತೇ ನಕ್ಸಲರು ಲಗ್ಗೆ ಹಾಕುತ್ತಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ ಆತಂಕ ಹೆಚ್ಚಾಗಿದೆ. ಮೋಸ್ಟ್ ವಾಂಡೆಟ್ ನಕ್ಸಲ್ ವಿಕ್ರಮ ಗೌಡ , ಮುಂಡಗಾರು ಲತಾ ತಂಡ ಪ್ರತ್ಯಕ್ಷವಾಗಿರುವ ಶಂಕೆ ವ್ಯಕ್ತವಾಗಿದೆ.


