ಉಡುಪಿ : ಮಂಗಳೂರಿನ ಹೆಸರಾಂತ ಹೊಟೇಲ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅತ್ರಾಡಿ ಮೂಲದ ಯುವಕ ಜನವರಿ 9 ಸೋಮವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮಹೇಶ್ ಶೆಟ್ಟಿ (28) ಮೃತ ವ್ಯಕ್ತಿ. ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ಅವರು ಮೊದಲು ಅತ್ರಾಡಿಯಲ್ಲಿ ನೃತ್ಯ ತರಬೇತಿ ಸಂಸ್ಥೆಯನ್ನು ನಿರ್ವಹಿಸುತ್ತಿದ್ದರು.


