ಉಡುಪಿ : ಸ್ಯಾಂಡಲ್ ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ವಿಧಿವಶರಾಗಿದ್ದಾರೆ.ಕೆಜಿಎಫ್, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ , ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅವರು ನಟಿಸಿದ್ದರು.
ವಾರದ ಹಿಂದೆ ಚಿತ್ರಿಕರಣ ವೇಳೆ ಅವರಿಗೆ ಸ್ಟ್ರೋಕ್ ತಗುಲಿತ್ತು ಇದರಿಂದ ಅವರು ಬೆಂಗಳೂರಿನ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇಂದು ಕುಂದಾಪುರದ ಮನೆಯಲ್ಲಿ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.