Thursday, March 12, 2026
Flats for sale
Homeಜಿಲ್ಲೆಉಡುಪಿ : ಸ್ಕೂಟರ್ ಗೆ ನಾಯಿಯನ್ನು ಕಟ್ಟಿ ಸುಮಾರು ದೂರ ಎಳೆದೊಯ್ದು ವಿಕೃತಿ ಮೆರೆದ ಸವಾರ...

ಉಡುಪಿ : ಸ್ಕೂಟರ್ ಗೆ ನಾಯಿಯನ್ನು ಕಟ್ಟಿ ಸುಮಾರು ದೂರ ಎಳೆದೊಯ್ದು ವಿಕೃತಿ ಮೆರೆದ ಸವಾರ ..!

ಉಡುಪಿ : ನಾಯಿಯನ್ನು ಸರಪಳಿಯಿಂದ ಬೈಕ್​ನ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿರುವ ಅಮಾನುಷ ಘಟನೆ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ.ಕಿಲೋಮೀಟರ್ ದೂರ ಬೈಕ್​ನಲ್ಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಕಾರು ಸವಾರನೊಬ್ಬ ನಾಯಿಯ ಮಾಲೀಕನನ್ನು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಯಾವುದೇ ನಾಚಿಕೆಯಿಲ್ಲದೇ ಅಬ್ಬೇಪಾರಿ ಉತ್ತರ ನೀಡಿದ್ದಾನೆ.

ಶಿರ್ವ ಪೇಟೆಯಲ್ಲಿ ನಾಯಿಯ ಕೊರಳಿಗೆ ಸರಪಳಿ ಹಾಕಿ, ಸ್ಕೂಟರ್‌ನ ಸೀಟಿಗೆ ಸರಪಳಿ ​​ಕಟ್ಟಿಕೊಂಡು ಸುಮಾರು ದೂರ ಎಳೆದೊಯ್ದು ವಿಕೃತಿ ಮೆರೆದಿದ್ದಾನೆ. ವ್ಯಕ್ತಿಯ ಹೀನ ಕೃತ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಲ್ಪ ದೂರದವರೆಗೆ ಓಡಿಕೊಂಡು ಬಂದಿರುವ ನಾಯಿ, ನಂತರ ಅಸ್ವಸ್ಥಗೊಂಡಿದೆ. ಅಸ್ವಸ್ಥಗೊಂಡಿದ್ದರೂ ಎಳೆದುಕೊಂಡೇ ಮಾಲೀಕ ಸ್ಕೂಟರ್ ನಲ್ಲಿ ಸಾಗಿದ್ದಾನೆ. ಅಸ್ವಸ್ಥಗೊಂಡಿದ್ದ ನಾಯಿ ರಕ್ತದಲ್ಲಿ ತೊಯ್ದು ಹೋಗಿದೆ. ಈ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತಿದೆ.

ನಾಯಿಯನ್ನು ಬೈಕ್​ಗೆ ಕಟ್ಟಿ ಎಳೆದೊಯ್ಯುತ್ತಿರುವ ಅಮಾನವೀಯ ದೃಶ್ಯದ ವಿಡಿಯೋವನ್ನು ನೋಡಿದ ನೆಟ್ಟಿಗರು ನಾಯಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular