Saturday, March 14, 2026
Flats for sale
Homeಜಿಲ್ಲೆಉಡುಪಿ : ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ಬ್ಲಾಕ್ ಮೈಲ್ : ಪ್ರಜ್ವಲ್ ರೇವಣ್ಣ ಮಾದರಿ...

ಉಡುಪಿ : ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ಬ್ಲಾಕ್ ಮೈಲ್ : ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ,ಕಾಮುಕ ಪರಾರಿ.

ಉಡುಪಿ : ಪೆನ್ ಡ್ರೈವ್ ಪ್ರಕರಣ ಇಡೀ ದೇಶದಲ್ಲಿ ಭಾರಿ ಮಾಡಿದ್ದು ಪ್ರಜ್ವಲ್ ರೇವಣ್ಣ ಮಾದರಿ ಮತ್ತೊಬ್ಬ ಕಾಮುಕ ಲೈಂಗಿಕ ದೌರ್ಜನ್ಯ ನಡೆಸಿ ಚಿತ್ರಿಸಿ ಬ್ಲಾಕ್ ಮೈಲ್ ಮಾಡಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಆತ ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ಬ್ಲಾಕ್ ಮೈಲ್ ಮಾಡುತ್ತಿದ್ದ ಎಂದು ವರದಿಯಾಗಿದೆ.

ಸ್ಥಳೀಯ ಉದ್ಯಮಿಯಾಗಿರುವ ಶ್ರೇಯಸ್ ನಾಯ್ಕ (25) ಎಂಬ ಆರೋಪಿ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದಿದೆ. ಲೈಂಗಿಕ ದೌರ್ಜನ್ಯ ಎಸಗುವ ದೃಶ್ಯಗಳನ್ನು ಸೆರೆ ಹಿಡಿದು ತನ್ನ ಖಾಸಗಿ ಲ್ಯಾಪ್ಟಾಪ್​ನಲ್ಲಿ ಇರಿಸಿಕೊಳ್ಳುತ್ತಿದ್ದ. ಈತ ಶಾಲೆ, ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಈತ ಬಾಲಕಿಯೊಬ್ಬಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅತ್ಯಾಚಾರದ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭವತಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತೀಚಿಗೆ ಲೈಂಗಿಕ ಚಟುವಟಿಗೆ ಮಾಡುವ ವಿಡಿಯೋ ಟ್ರೆಂಡ್ ಆಗಿದ್ದು ಇನ್ನಿತರಿಗೆ ಕಳಿಸಿ ವಿಕೃತಿ ಮೆರೆಯುವ ಕಾಮುಕರು ಅರೆಸ್ಟ್ ಆಗುತ್ತಿದ್ದು ತಾವೇ ಮಾಡಿದ ವಿಡಿಯೋ ತಮಗೆ ಕಂಟಕವಾದಂತಾಗಿದೆ. ಮೇ 18 ರಂದು ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು ,ಆರೋಪಿ ಶ್ರೇಯಸ್ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆ ಮಾಡಿ ಬಲೆ ಬಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular