ಉಡುಪಿ : ಆಘಾತಕಾರಿ ಘಟನೆಯೊಂದರಲ್ಲಿ, ರೌಡಿ ಶೀಟರ್ ಸೈಫುದ್ದೀನ್ ಸೆಪ್ಟೆಂಬರ್ 27 ರ ಶನಿವಾರ ಮಲ್ಪೆಯಲ್ಲಿ ದುಷ್ಕರ್ಮಿಗಳು ನೆಡೆಸಿದ ತಲ್ವಾರ್ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ. ಮಣಿಪಾಲ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೃತ ವ್ಯಕ್ತಿ.
ತಲ್ವಾರ್ ದಾಳಿ ನಡೆದಿದೆ ದಾಳಿ ಕೋರರು ಹತ್ಯೆ ಮಾಡಿದ್ದಾರೆಂದು ಮಾಹಿತಿ ದೊರೆತಿದೆ.ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ .
ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, “ಬೆಳಿಗ್ಗೆ 10–11 ಗಂಟೆಯ ನಡುವೆ, ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಡವೂರಿನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೇಲೆ 18 ಪ್ರಕರಣಗಳು ದಾಖಲಾಗಿದ್ದವು. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂವರು ಆರೋಪಿಗಳು ಅವರ ಮನೆಯಲ್ಲಿ ಅವರ ಮೇಲೆ ದಾಳಿ ಮಾಡಿದ್ದಾರೆ. ದಾಳಿಕೋರರು ಅವರ ಸ್ವಂತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿಯ ಉದ್ದೇಶ ಮತ್ತು ಅದರ ಹಿಂದಿನವರು ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಬಹಿರಂಗಪಡಿಸಲಾಗುವುದು. ತಲ್ವಾರ್ ಬಳಸಿ ದಾಳಿ ನಡೆಸಲಾಗಿದ್ದು, ಹಲವು ಸ್ಥಳಗಳಲ್ಲಿ ರಕ್ತಸ್ರಾವ ಕಂಡುಬಂದಿದೆ. ಆರೋಪಿಗಳನ್ನು ಎಕೆಎಂಎಸ್ ಬಸ್ ಕಂಪನಿಯ ಚಾಲಕರು ಎಂದು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ .


