Friday, March 13, 2026
Flats for sale
Homeಜಿಲ್ಲೆಉಡುಪಿ : ನಿಂತಲ್ಲೇ ಅಲುಗಾಡಿದ ಕಾರು, ಬೆಚ್ಚಿಬಿದ್ದ ಸ್ಥಳಿಯರು,ಬಾಗಿಲು ತೆರೆದಾಗ ಜೋಡಿಯ ರಾಸಲೀಲೆ ದರ್ಶನ..!

ಉಡುಪಿ : ನಿಂತಲ್ಲೇ ಅಲುಗಾಡಿದ ಕಾರು, ಬೆಚ್ಚಿಬಿದ್ದ ಸ್ಥಳಿಯರು,ಬಾಗಿಲು ತೆರೆದಾಗ ಜೋಡಿಯ ರಾಸಲೀಲೆ ದರ್ಶನ..!

ಉಡುಪಿ : ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರು ಇದ್ದಕಿದ್ದಂತೆ ಅಲುಗಾಡಿದೆ.ಏನಪ್ಪಾ ಇದು ಈ ರೀತಿ ಕಾರು ಅಲುಗಾಡುತ್ತಿರುವುದು ಎಂದು ಜನರು ಬಂದು ನೋಡಿದಾಗ ಎಲ್ಲಾ ವಿಂಡೋ ಗಳಿಗೆ ಪರದೆ ಹಳವಡಿಸಲಾಗಿತ್ತು.ಇಂತಹ ಒಂದು ಘಟನೆ ಉಡುಪಿಯ ನಗರಸಭೆ ಸಮೀಪದ ರಸ್ತೆಯಲ್ಲಿ ಹಾಡಹಗಲಲ್ಲೇ ನಡೆದಿದೆ.

ಉಡುಪಿಯ ಹೃದಯಭಾಗದಲ್ಲಿ ಅತಿ ಹೆಚ್ಚು ಜನರು ಸಂಚಾರ ಮಾಡುವ ನಗರಸಭೆಯ ಸಮೀಪದಲ್ಲಿಯೇ ಇರುವ ರಸ್ತೆಯಲ್ಲಿ ಕಾರು ಅಲ್ಲಾಡುವುದನ್ನು ನೋಡಿ ಜನರು ಕಿಟಕಿಯಿಂದ ಇಣುಕಿ ಹಾಕಿದ್ದಾರೆ. ಆದರೆ, ಕಾರಿಗೆ ಕಿಟಕಿಗಳಿಗೆ ಪರದೆಯ ರೀತಿಯಲ್ಲಿ ಬಟ್ಟೆಯನ್ನು ಹೊದಿಸಲಾಗಿತ್ತು. ಹಾಗಾಗಿ, ಹೊರಗಡೆ ಇದ್ದವರಿಗೆ ಒಳಗೆ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗಿಲ್ಲ. ಬಳಿಕ ಜನರು ಡೋರ್​ ತೆಗೆಯಲು ಪ್ರಯತ್ನಿಸಿದ್ದಾರೆ. ಬಳಿಕ ಕಾರಿನೊಳಗಿದ್ದ ಜೋಡಿ ಬಟ್ಟೆ ಸರಿ ಮಾಡಿಕೊಂಡು ಡೋರ್ ಓಪನ್ ಮಾಡಿದೆ. ಆಗ ಸಾರ್ವಜನಿಕರಿಗೆ ಕಾರಿನೊಳಗಿದ್ದ ಯುವಕ-ಯುವತಿಯ ದರ್ಶನವಾಗಿದೆ.ಈ ಬಗ್ಗೆ ಆಕ್ರೋಶಗೊಂಡ ಸಾರ್ವಜನಿಕರು ನಿಮಗೆ ಎಲ್ಲಿಯೂ ರೂಮ್ ಸಿಗಲಿಲ್ಲವೇ ಇಲ್ಲಿ ಬಂದು ಯಾಕೆ ಇಂತಹ ಕೆಲಸ ಮಾಡುತ್ತೀರಾ ಎಂದು ನೋಡಿದ ಸ್ಥಳೀಯರು ಛೀಮಾರಿ ಹಾಕಿದ್ದಾರೆ.ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಉಡುಪಿ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಬಳಿಕ ಜೋಡಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular