Wednesday, March 4, 2026
Flats for sale
Homeಜಿಲ್ಲೆಉಡುಪಿ : ಗ್ರಾನೈಟ್‌ ಚಪ್ಪಡಿ ಬಿದ್ದು ಇಬ್ಬರು ಕಾರ್ಮಿಕರು ಸಾವು.

ಉಡುಪಿ : ಗ್ರಾನೈಟ್‌ ಚಪ್ಪಡಿ ಬಿದ್ದು ಇಬ್ಬರು ಕಾರ್ಮಿಕರು ಸಾವು.

ಉಡುಪಿ : ಮಲ್ಪೆ ಸಮೀಪದ ತೊಟ್ಟಂನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ನೆಲಹಾಸು ಕೆಲಸಕ್ಕಾಗಿ ಕಂಟೈನರ್ ಲಾರಿಯಿಂದ ಇಳಿಸುತ್ತಿದ್ದಾಗ ಗ್ರಾನೈಟ್ ಚಪ್ಪಡಿ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಬಾಬುಲಾಲ್ (35) ಮತ್ತು ಭಾಸ್ಕರ್ (35) ಎಂದು ಗುರುತಿಸಲಾಗಿದ್ದು, ಇಬ್ಬರೂ ಒರಿಸ್ಸಾ ಮೂಲದ ಕಾರ್ಮಿಕರು.

ತೋಟಂ ಎಂಬಲ್ಲಿನ ಮನೆಯೊಂದರಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಕಂಟೈನರ್ ಲಾರಿಯಲ್ಲಿ ಗ್ರಾನೈಟ್ ತರಲಾಗುತ್ತಿತ್ತು. ಈ ವೇಳೆ ಲಾರಿಯೊಳಗೆ ಗ್ರಾನೈಟ್ ಬಿದ್ದು ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular