ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯಲ್ಲಿ ಕ್ರಿಶ್ಚಿಯನ್ ಧರ್ಮ ಕ್ಕೆ ಮತಾಂತರವಾಗಲು ಪ್ರಚೋದನೆ ನೀಡಲು ಹಾಗೂ ಪ್ರಚಾರಕ್ಕೆ ಬಂದಿದ್ದ ಇಬ್ಬರು ಮಹಿಳೆಯರನ್ನ ಹಿಗ್ಗಾ ಮುಗ್ಗ ಬೈದು ಸ್ಥಳೀಯರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿಯಾ ಬ್ರಹ್ಮಾವರ ಬಳಿಯ ಉಪ್ಪಿನಕೋಟೆಯಲ್ಲಿ ನಡೆದಿದೆ.
ದಲಿತ ಕೇರಿ,ಆರ್ಥಿಕವಾಗಿ ದುರ್ಬಲ ವಾದವರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸ್ಥಳೀಯರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರಚಾರ ಮಾಡಲು ಯತ್ನಿಸಿದ ಸಮಯದಲ್ಲಿ ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಮತಾಂತರ ಮಾಡಲು ಬಂದಿದ್ದೀರ ಎಂದು ಪ್ರಶ್ನಿಸಿದ್ದಾನೆ.ಮಹಿಳೆಯರ ಕೈಯಲ್ಲಿ ಧರ್ಮ ಪ್ರಚಾರದ ಪುಸ್ತಕಗಳಿರುವುದು ಕಂಡು ಆಕ್ರೋಶಗೊಂಡ ವ್ಯಕ್ತಿ ದೊಣ್ಣೆ ಹಿಡಿದು ಅವ್ಯಾಚ್ಯ ಶಬ್ದಗಳಿಂದ ಬೈದು ಇಲ್ಲಿಂದ ಹೊರ ನಡೆತಿರೋ ದೊಣ್ಣೆಯಿಂದ ಬಾರಿಸಲೋ ಎಂದು ಅವಾಜ್ ಹಾಕಿ ಅಟ್ಟಾಡಿಸುವ ಹಾಗೂ ಭಯಭೀತರಾದ ಮಹಿಳೆಯರು ಸ್ಥಳದಿಂದ ಓಡಿಹೋಗುವ ವಿಡಿಯೋ ವೈರಲ್ ಆಗಿದೆ.
ಕಳೆದ ಹಲವು ದಿನದಿಂದ ನಡೆಯುವ ಜೆರೊಸಾ ಶಿಕ್ಷಣ ಸಂಸ್ಥೆಯ ಆರೋಪ ಪ್ರತ್ಯಾರೋಪ ದಿನಕ್ಕೊಂದು ತಿರುವು ಪಡೆಯುತ್ತಿದ್ದು ರಾಜಕೀಯ ಪ್ರಭಾವದ ಬೀರಿದ ಪರಿಣಾಮ ಉಲ್ಟಾ ಹೊಡೆದಿದೆ ಎಂದು ಸಾಮಾಜಿಕಜಾಲತಾಣದಲ್ಲೂ ಚರ್ಚೆಗೆ ಗ್ರಾಸವಾಗಿತ್ತು ಇದೀಗ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.


