Tuesday, March 10, 2026
Flats for sale
Homeಜಿಲ್ಲೆಉಡುಪಿ : ಕಾಲೇಜು ವಾಶ್ ರೂಂ ವಿಡಿಯೋ ಪ್ರಕರಣದ ತನಿಖೆಗೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ.

ಉಡುಪಿ : ಕಾಲೇಜು ವಾಶ್ ರೂಂ ವಿಡಿಯೋ ಪ್ರಕರಣದ ತನಿಖೆಗೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ.

ಉಡುಪಿ : ಕಾಲೇಜು ವಾಶ್ ರೂಂ ವಿಡಿಯೋ ಪ್ರಕರಣದ ತನಿಖೆಗೆ ನೂತನ ತನಿಖಾಧಿಕಾರಿಯಾಗಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ಜುಲೈ 29 ರ ಶನಿವಾರದಂದು ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಕ್ಷಯ್ ಹಕೇ ಮಚ್ಚಿಂದ್ರ ಅವರು ಪ್ರಕರಣದ ತನಿಖೆಗೆ ಅವರನ್ನು ನೇಮಿಸಿದರು.

ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಬೇಡಿಕೆಯಂತೆ ಎಸ್‌ಪಿ ಮಂಜುನಾಥ್ ಗೌಡ ಅವರ ಸ್ಥಾನಕ್ಕೆ ಬೆಳ್ಳಿಯಪ್ಪ ಅವರನ್ನು ನೂತನ ತನಿಖಾಧಿಕಾರಿಯನ್ನಾಗಿ ನೇಮಿಸಿದರು.

ಕಾಲೇಜಿನ ವಾಶ್‌ರೂಮ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular