Friday, November 22, 2024
Flats for sale
Homeದೇಶಅಹಮದಾಬಾದ್ : ವರುಣನ ಅಬ್ಬರಕ್ಕೆ ಗುಜರಾತ್ ತತ್ತರ, 29 ಮಂದಿ ಸಾವು..!

ಅಹಮದಾಬಾದ್ : ವರುಣನ ಅಬ್ಬರಕ್ಕೆ ಗುಜರಾತ್ ತತ್ತರ, 29 ಮಂದಿ ಸಾವು..!

ಅಹಮದಾಬಾದ್ : ಗುಜರಾತ್ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 29 ಕ್ಕೆ ಏರಿಕೆಯಾಗಿದ್ದು ಭಾರೀ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನ ಇಲಾಖೆ `ರೆಡ್’ ಅಲರ್ಟ್ ಘೋಷಿಸಿದೆ.

ಸೌರಾಷ್ಟ್ರ ಮತ್ತು ಕಚ್ ಸೇರಿದಂತೆ ಮತ್ತಿತರ ಭಾಗದಲ್ಲಿ ಈಶಾನ್ಯ ಅರೇಬಿಯನ್ ಸಮುದ್ರದ ಭಾಗದಲ್ಲಿ ತೀವ್ರ ವಾಯುಭಾರ ಕುಸಿತದಿಂದ ಮತ್ತಷ್ಟು ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಹಲವು ದಿನಗಳಿಂದ ಪ್ರವಾಹದಿAದ ನಲುಗಿ ಹೋಗಿರುವ ರಾಜ್ಯದ ಹಲವು ಭಾಗಗಳ ಜನರನ್ನು ಸುಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಪ್ರಗತಿಯಲ್ಲಿದೆ. ಕಳೆದ ಮೂರು ದಿನಗಳಲ್ಲಿ ಮಳೆ ಸಂಬAಧಿತ
ಅಪಘಾತಗಳಲ್ಲಿ ಸಾವಿನ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ಪಡೆ ತಿಳಿಸಿದೆ.

ಕಚ್, ದೇವಭೂಮಿ ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ರಾಜ್‌ಕೋಟ್,ಪೋರಬಂದರ್, ಜುನಾಗಢ್, ಗಿರ್ ಸೋಮನಾಥ್, ಅಮ್ರೇಲಿ, ಭಾವನಗರ, ಮತ್ತು ಬೊಟಾಡ್ಜಿ ಲ್ಲೆಗಳಲ್ಲಿ 12 ಜಿಲ್ಲೆಗಳಲ್ಲಿ ಭಾರಿ
ಮಳೆಯಾಗುವ ನಿರೀಕ್ಷೆಯಿದೆ. ಸೌರಾಷ್ಟ್ರ ಪ್ರದೇಶದ ಜಿಲ್ಲೆಗಳಾದ ದೇವಭೂಮಿ ದ್ವಾರಕಾ, ಜಾಮ್‌ನಗರ, ರಾಜ್‌ಕೋಟ್ ಮತ್ತು ಪೋರಬಂದರ್‌ನಲ್ಲಿಸಂಜೆ 6 ಗಂಟೆಗೆ ಕೊನೆಗೊಂಡ 12 ಗಂಟೆಗಳ ಅವಧಿಯಲ್ಲಿ ೫೦ ಮಿಮೀ ಮತ್ತು 200 ಮಿಮೀ ಮಳೆಯಾಗಿದೆ.

ದೇವಭೂಮಿ ದ್ವಾರಕಾ ಜಿಲ್ಲೆಯ ಭನ್ವಾಡ್ ತಾಲೂಕಿನಲ್ಲಿ 185 ಮಿಮೀ ಮಳೆಯಾಗಿದೆ, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದು ವರದಿ ಆಗಿದೆ.. ರಾಜ್ಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು 22 ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳಿಗೆ ಸಹಾಯ ಮಾಡಲು ಸೇನೆಯ ಆರು ತುಕಡಿಗಳನ್ನು ನಿಯೋಜಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 40,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಪಾಂಡೆ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಇನ್ಸ್ಪೆಕ್ಟರ್ ಮಂಜಿತ್ ಪ್ರಕಾರ, ಗುಜರಾತ್‌ನ
ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಮುಂದುವರೆದಿದ್ದು, ಅವರು 95 ಜನರನ್ನು ರಕ್ಷಿಸಿದ್ದಾರೆ. “ಕಳೆದ 2 ದಿನಗಳಲ್ಲಿ, ದ್ವಾರಕಾದಲ್ಲಿ ಭಾರೀ ಮಳೆಯಾಗಿದೆ.ಜನರ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ.

ಗುಜರಾತ್ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಪ್ರಕಾರ, ಇದುವರೆಗೆ 5000 ಕ್ಕೂ ಹೆಚ್ಚು ಜನರನ್ನು ಪುನರ್ವಸತಿ ಕಲ್ಪಿಸಲಾಗಿದೆ. ಸಿಎಂ ಜೊತೆ ಪಿಎಂ ಚರ್ಚೆ ಗುಜರಾತ್ ವಿವಿಧ ಭಾಗಗಳಲ್ಲಿ ಬಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಹಾನಿ ಆಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇAದ್ರ ಪಟೇಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ನೆರವು ನೀಡುವ ಭರವಸೆ ನೀಡಿದ್ದಾರೆ.

ನಾಗರಿಕರ ಜೀವ ಮತ್ತು ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕೇಂದ್ರದಿಂದ ಎಲ್ಲಾ ಅಗತ್ಯ ಬೆಂಬಲ ಮತ್ತು ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್ಯದ ಪರಿಸ್ಥಿತಿ ಪರಿಶೀಲಿಸಿದ್ದು ವಡೋದರಾ ನಗರ ಮತ್ತು ಜಿಲ್ಲೆ, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳಲ್ಲಿ ನೀರಿನಲ್ಲಿ ಸಿಲುಕಿರುವ ಜನರಿಗೆ
ಪರಿಹಾರ ಕಾರ್ಯಾಚರಣೆಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಳಿಗೆ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular