Friday, January 16, 2026
Flats for sale
Homeಕ್ರೀಡೆಅಹಮದಾಬಾದ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ,3-1 ರಿಂದ ಭಾರತಕ್ಕೆ ಸರಣಿ.

ಅಹಮದಾಬಾದ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ,3-1 ರಿಂದ ಭಾರತಕ್ಕೆ ಸರಣಿ.

ಅಹಮದಾಬಾದ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಿ೨೦ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ 231 ರನ್‌ಗಳ ಬೃಹತ್ ಮೊತ್ತ ಪೇರಿಸಿ, ದಕ್ಷಿಣ ಅಫ್ರಿಕಾ ಮೇಲೆ ಒತ್ತಡ ಹೇರುವ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಿದ ಸೂರ್ಯ ಪಡೆಗೆ, ಹರಿಣಗಳು ಕೂಡ ಪ್ರಬಲ ಪೈಪೋಟಿಯನ್ನೇ ತೋರಿದರು.

ಅಂತಿಮ ಗೆಲುವು ಭಾರತಕ್ಕೆ ಸಿಕ್ಕಿದ್ದು, 3-1 ರಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ೨೦೨೫ರ ತನ್ನ ಹೋರಾಟ ಅಂತ್ಯಗೊಳಿಸುವ ಮುನ್ನ, ಅಂತಿಮ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಪವರ್ ಪ್ಲೇ ಬಳಸಿಕೊಂಡ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹರಿಣಗಳಿಗೆ ನಡುಕ ಹುಟ್ಟಿಸುವ ಯತ್ನ ಮಾಡಿದರು. ಈ ಇಬ್ಬರ ಬಿರುಸಿನ ಬ್ಯಾಟಿಂಗ್‌ಗೆ ಪವರ್‌ಪ್ಲೇನಲ್ಲಿ ೬೦ಕ್ಕಿಂತ
ಅಧಿಕ ರನ್ ಮೂಡಿ ಬಂತು. ೫.೪ ಓವರ್‌ನಲ್ಲಿ ಕಾರ್ಬಿನ್ ಬೋಷ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಅಭಿಷೇಕ್ ಶರ್ಮಾ ೩೪ ರನ್‌ಗಳಿಸಿ ಕ್ಯಾಚ್ ನೀಡಿದರು. ಇದಾದ ಬಳಿಕ ಬಂದ ತಿಲಕ್ ವರ್ಮಾ ತಾನು ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಕಳುಹಿಸಿದರು.

ಈ ಸರಣಿಯಲ್ಲಿ ಮೊದಲ ಬಾರಿಗೆ ಬ್ಯಾಟ್ ಹಿಡಿದು ಬಂದಿದ್ದ ಸಂಜು ಸ್ಯಾಮ್ಸನ್ ತಂಡಕ್ಕೆ ಭದ್ರಬುನಾದಿ ಹಾಕಿಕೊಡುವಲ್ಲಿ ಯಶಸ್ವಿಯಾದರು. ಆದರೂ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳಿಂದ 34 ರನ್‌ಗಳಿಸಿದ್ದ ಸ್ಯಾಮ್ಸನ್, ಲಿಂಡೆ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಜೊತೆಗೆ ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಇಲ್ಲಿಗೆ ಭಾರತದ ಮೊತ್ತ115 ರನ್. ತಿಲಕ್-ಹಾರ್ದಿಕ್ ಜುಗಲ್‌ಬಂದಿ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡ ಭಾರತಕ್ಕೆ ಹಾರ್ದಿಕ್ ಪಾಂಡ್ಯ ಆಸರೆಯಾದರು. ಹಾರ್ದಿಕ್ ಪಾಂಡ್ಯ ಕೂಡ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸುವ ಮೂಲಕ ದೊಡ್ಡ ಮೊತ್ತ ಬಾರಿಸುವ ಮುನ್ಸೂಚನೆ ನೀಡಿದರು. ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್‌ನಿAದ ಭಾರತ 17.4 ಓವರ್‌ಗಳಲ್ಲೇ ಇನ್ನೂರರ ಗಡಿ ತಲುಪಿತು.

ಈ ಜೋಡಿ ಕೇವಲ 44 ಎಸೆತಗಳಲ್ಲೇ 105 ರನ್‌ಗಳ ಜೊತೆಯಾಟ ಕಟ್ಟಿದರು. ಕೇವಲ 23 ಎಸೆತಗಳಲ್ಲೇ 65 ರನ್‌ಗಳಿಸಿದ ಹಾರ್ದಿಕ್ ಬಾರ್ಟ್ಮನ್ ಬೌಲಿಂಗ್‌ನಲ್ಲಿ ಔಟಾದರು. ಆ ವೇಳೆಗೆ ಭಾರತ 220 ರನ್‌ಗಳಿಸಿತ್ತು. ಶಿವಂ ದುಬೆ ಕೂಡ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದರು. ಕೊನೆ ಎಸೆತಕ್ಕೂ ಮುನ್ನ ತಿಲಕ್ ವರ್ಮಾ ರನೌಟ್‌ಗೆ ಬಲಿಯಾದರು. ಕೊನೆ ಎಸೆತದಲ್ಲಿ ದುಬೆ ಬೌಂಡರಿ ಬಾರಿಸಿದ್ದರಿAದ, ಭಾರತ 231 ರನ್‌ಗಳಿಸಿತು.

ವರುಣ್ ಸ್ಪಿನ್ ಜಾದೂ ಭಾರತದ ಈ ಪಂದ್ಯ ಗೆಲ್ಲಲು ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿಯ ಕೊಡುಗೆಯೂ ಅಪಾರ. ಏಡೇನ್ ಮಾರ್ಕ್ರಂ ಅವರನ್ನೂ ಸೇರಿ ಒಟ್ಟು ನಾಲ್ವರ ವಿಕೆಟ್ ಪಡೆದ ವರುಣ್ ಚಕ್ರವರ್ತಿ, ಈ ಸರಣಿಯಲ್ಲಿ ಒಟ್ಟು ತನ್ನ ವಿಕೆಟ್‌ಗಳ ಸಂಖ್ಯೆಯನ್ನು ೬ಕ್ಕೇರಿಸಿಕೊಂಡರು. ಈ ಪಂದ್ಯದಲ್ಲಿ ಕೊಂಚ ದುಬಾರಿಯಾದರೂ, ದಕ್ಷಿಣ ಆಫ್ರಿಕಾ ಕುಸಿತ ಕಾಣಲು ಕಾರಣರಾದರು.

RELATED ARTICLES

LEAVE A REPLY

Please enter your comment!
Please enter your name here

Most Popular